ನಂಜೆದೇವಪುರದಲ್ಲಿ 5 ಹುಲಿಗಳು ಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಅವರು ನಗರದ ಜಿಲ್ಲಾಡಳಿತ ಭವನದಲ್ಲಿ ಅರಣ್ಯಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸುತ್ತಿದ್ದಾರೆ. ಸಭೆಯಲ್ಲಿ ಅರಣ್ಯಾಧಿಕಾರಿಗಳು ಮಾತನಾಡಿ, ಥರ್ಮಲ್ ಡ್ರೋನ್ ಕ್ಯಾಮರಾಕ್ಕೆ ಬೇಡಿಕೆ ಇಟ್ಟರು, ಪ್ರತಿ ಡಿವಿಜನ್ ಗೆ ಒಂದು ಥರ್ಮಲ್ ಡ್ರೋನ್ ಬೇಕು, ಒಂದು ಡ್ರೋನ್ ಕ್ಯಾಮರಾಕ್ಕೆ 12 ಲಕ್ಷ ವೆಚ್ಚ ತಗುಲಿದೆ ಎಂಬ ಮನವಿಗೆ ಥರ್ಮಲ್ ಡ್ರೋನ್ ತರಿಸುವ ಭರವಸೆಯನ್ನು ಸಚಿವರು ನೀಡಿದರು. ತಕ್ಷಣವೇ ಥರ್ಮಲ್ ಡ್ರೋನ್ ಕ್ಯಾಮರ ತರೆಸಿಕೊಡುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.