ಚಿಟಗುಪ್ಪ: ಪಟ್ಟಣದಲ್ಲಿ ಸತ್ಯಾತ್ಮತೀರ್ಥರಿಂದ ಭಕ್ತರಿಗೆ ವಿಶೇಷ ದರ್ಶನ
ಜಗದ್ಗುರು 1008ಸತ್ಯಾತ್ಮತೀರ್ಥರ ದಿವ್ಯ ನೇತ್ರತ್ವದಲ್ಲಿ ಮನ್ಮೂಲ ರಾಮದೇವರ ವಿಶೇಷ ಪೂಜೆ ಭಾನುವಾರ ಸಂಜೆ 5ಕ್ಕೆ ಪಟ್ಟಣದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು. ಬಳಿಕ ಬ್ರಾಹ್ಮಣ ಸಮಾಜದ ಹಿರಿಯ ಜೀವಿ ಗುಂಡೇರಾವ್ ಕುಲಕರ್ಣಿ ಅವರ ಗೃಹಪ್ರಾಂಗಣದಲ್ಲಿ ಸಮಾಜದ ಅನೇಕ ಜನರಿಗೆ ಶ್ರೀಗಳು ಮುದ್ರ ರಕ್ಷೆಯನ್ನು ನೀಡಿದರು ಈ ವೇಳೆ ಸಮಾಜದ ಪ್ರಮುಖರಾದ ಶಶಿ ದೀಕ್ಷಿತ್, ಗಿರೀಶ್ ಕುಲಕರ್ಣಿ ಸೇರಿದಂತೆ ಇನ್ನೂ ಅನೇಕ ಜನ ಗಣ್ಯರು ಪಾಲ್ಗೊಂಡಿದ್ದರು.