ಚಿತ್ರದುರ್ಗದ ಭೀಮಸಮುದ್ರ ಭಾಗದ ಗಣಿ ಭಾದಿತ ಪ್ರದೇಶಕ್ಕೆ ಸಾಮಾಜಿಕ ಹೋರಾಟ SR ಹಿರೇಮಠ್ ತಂಡ ಭೇಟಿ ನೀಡಿತ್ತು. ತಂಡದ ರಾಜ್ಯ ಸಂಚಾಲಕ ಸೂರ್ಯನಾರಾಯಣ ಗೌಡ ಅವರ ನೇತೃತ್ವದಲ್ಲಿ ಆಗಮಿಸಿ,ಗಣಿ ಭಾದಿತ ಪ್ರದೇಶದಲ್ಲಿನ ಜನವಸತಿ ಪ್ರದೇಶಕ್ಕೆ ಭೇಟಿ ನೀಡಿ, ವಾಸ್ತವತೆ ಅರಿತರು. ಅಂಗನವಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸೇರಿ ಹಲವು ಕಡೆ ಭೇಟಿ ನೀಡಿದರು. ಈ ವೇಳೆ ಅಲ್ಲಿನ ಸ್ಥಳೀಯ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಈ ವೇಳೆ ತಂಡದಲ್ಲಿ ವೆಂಕಟೇಶ್, ದೀಪಕ್, ಯಾದವರೆಡ್ಡಿ, ಇಂದ್ರಮ್ಮ ಸೇರಿ ಹಲವು ರೈತ ಮುಖಂಡರು ಕೂಡಾ ಸಾಥ್ ನೀಡಿದರು