ಕಲಬುರಗಿ: ಚಿನ್ನ ಬೆಳ್ಳಿ ಅಲ್ಲ... ಸಿಸಿಟಿವಿ ಕ್ಯಾಮೆರಾವನ್ನೇ ಕದ್ದ ಕಳ್ಳರು!: ಕಳ್ಳರ ಕೃತ್ಯ ಡಿವಿಆರ್ನಲ್ಲಿ ಸೆರೆ, ನಗರದಲ್ಲಿ ಘಟನೆ
ಕಲಬುರಗಿಯಲ್ಲಿ ನಡೆದಿರುವ ಈ ಘಟನೆ ಕೇಳಿದರೆ ಯಾರಿಗೂ ಆಶ್ಚರ್ಯವಾಗುತ್ತದೆ... ಸಾಮಾನ್ಯವಾಗಿ ಕಳ್ಳರು ಚಿನ್ನ, ಬೆಳ್ಳಿ, ನಗದು ಕದಿಯುತ್ತಾರೆ. ಆದರೆ ಇಲ್ಲಿನ ಕಳ್ಳರು ಬುದ್ಧಿವಂತರು.. ಅವರು ಕಳವು ಮಾಡುವ ದೃಶ್ಯ ಸೆರೆಹಿಡಿಯುವ ಕ್ಯಾಮೆರಾವನ್ನೇ ಕದಿಯುವ ಸಾಹಸ ಮಾಡಿದ್ದಾರೆ.ನಗರದ ಅಮ್ಮನಗರ ಪ್ರದೇಶದಲ್ಲಿರುವ ಸನ್ರೈಸ್ ಆಂಗ್ಲ ಮಾಧ್ಯಮ ಶಾಲೆ ಮುಂಭಾಗ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾವನ್ನು ಇಬ್ಬರು ಕಳ್ಳರು ಮಧ್ಯರಾತ್ರಿ ಬೈಕಿನಲ್ಲಿ ಬಂದು ಕಳವು ಮಾಡಿದ್ದಾರೆ. ಶಾಲೆಯ ಚೇರ್ಮನ್ ಮಲ್ಲಿನಾಥ ಸಾಹು ಅವರ ದೂರು ಮೇರೆಗೆ ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳ್ಳರು ರಾತ್ರಿ 1 ರಿಂದ 1:20ರ ನಡುವೆ ಕ್ಯಾಮೆರಾವನ್ನು ಕಳವು ಮಾಡಿದ್ದು, ಅವರ ಕೃತ್ಯದ ದೃಶ್ಯ ಡಿವಿಆರ್ನಲ್ಲಿ ಸಿಕ್ಕಿಬಿದ್ದಿದೆ... ₹5,000