ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ಹೆದ್ದಾರಿಯಲ್ಲಿ ಕಾರಿನ ಗ್ಲಾಸ್ ಒಡೆದು ಚಿನ್ನದ ಒಡವೆ ಕಳ್ಳತನ ಮಾಡಿರುವ ಘಟನೆ ಜರುಗಿದೆ. ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯಲ್ಲಿ ಬೆಂಗಳೂರು-ಮಂಗಳೂರು ಹೆದ್ದಾರಿ ಪಕ್ಕದಲ್ಲಿ ನಿಲ್ಲಿಸಿದ್ದ ಕಾರಿನಿಂದ ಸುಮಾರು ₹4.51 ಲಕ್ಷ ಮೌಲ್ಯದ 51 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ಯಶವಂತಪುರ ಮೂಲದ ಮೊಹಮ್ಮದ್ ಹನೀಫ್ ಎಂ.ಪಿ. ಅವರು ಬೆಳ್ಳೂರು ಠಾಣೆಗೆ ನೀಡಿದ ದೂರಿನಲ್ಲಿ, ಬ್ಯಾಗ್ನಲ್ಲಿದ್ದ ಮಕ್ಕಳ ಕತ್ತಿನ ಚೈನ್ಗಳು, ಕಾಲಿನ ಚೈನ್, ಕಿವಿಯೋಲೆಗಳು, ಉಂಗುರ ಸೇರಿದಂತೆ ಚಿನ್ನಾಭರಣ ಕಳವಾಗಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಬೆಳ್ಳೂರು ಪೊಲೀಸರು ಭಾನುವಾರ ಮಧ್ಯಮ 3 ಗಂಟೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.