ಹಿರಿಯೂರು:-ನಗರದ ಎಪಿಎಂಸಿ ಆವರಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಸಮರ್ಪಕ ಜಾರಿಗೆ ಕುರಿತಂತೆ ತಾಲೂಕು ರೈತ ಸಂಘದ ಪದಾಧಿಕಾರಿಗಳ ಸಭೆ ಕರೆಯಲಾಯಿತು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮಧ್ಯ ಕರ್ನಾಟಕ ಜನರ ಬಹುದ್ದಶಕಗಳ ಬೇಡಿಕೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತರಲು ಸಮರ್ಪಕವಾಗಿ ಹಣ ನೀಡುತ್ತಿಲ್ಲ ಇದರಿಂದಾಗಿ ಯೋಜನೆ ಕುಂಠಿತವಾಗುತ್ತಿದೆ, ಈಗಾಗಲೇ ಯೋಜನೆ ಬಹುತೇಕ ಪೂರ್ಣಗೊಳ್ಳಬೇಕಿತ್ತು ಆದರೆ ಸರ್ಕಾರಗಳ ಇಚ್ಛಾ ಶಕ್ತಿ ಕೊರತೆಯಿಂದಾಗಿ ಇನ್ನೂ ಕೂಡ ಸಮರ್ಪಕವಾಗಿ ಜಾರಿಗೆ ಆಗುತ್ತಿಲ್ಲ ಆದ್ದರಿಂದ ಹೋರಾಟ ಮಾಡಲಾಗುವುದು ಎಂದರು.