ಬಳ್ಳಾರಿ: ನಗರದಲ್ಲಿ ಧಾರಾಕಾರ ಮಳೆ, ಕೆರೆಯಂತಾದ ರಸ್ತೆಗಳು ಸವಾರರ ಪರದಾಟ
ಬಳ್ಳಾರಿ ನಗರದಲ್ಲಿಭರ್ಜರಿ ಮಳೆಯಾಗಿದ್ದು, ನಗರದ ಹಲವೆಡೆ ನೀರುಉಕ್ಕಿ ರಸ್ತೆಗೆ ಹರಿಯುತ್ತಿದೆ. ಬಳ್ಳಾರಿ ನಗರದಲ್ಲಿ ಮಂಗಳವಾರ ಮಧ್ಯಾಹ್ನ1;30 ರಿಂದ ಸತತ 2ಗಂಟೆಗಳ ಕಾಲ ಬಿರುಸಿನ ಮಳೆ ಸುರಿಯಿತು. ಮಳೆಯಿಂದರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದೆನಗರದ ಬಹುತೇಕ ಕಡೆ ಮಳೆ ನೀರಿನಿಂದ ಜಲಾವೃತವಾಗಿದ್ದು ಜನರು ಪರದಾಡುವ ಪರಿಸ್ಥಿತಿ ಎದುರಾಗಿದ್ದು, ದ್ವಿಚಕ್ರ ವಾಹನ ಸವಾರರು, ದಾರಿಹೋಕರು ತೀವ್ರ ತೊದರೆ ಅನುಭವಿಸಿದರು ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳು ಕೆಸರುಮಯವಾಗಿವೆ. ಹೊಂಡ ಗುಂಡಿಗಳಿಂದ ಕೂಡಿರುವ ನಗರದ ಬಹುತೇಕ ರಸ್ತೆಯಲ್ಲಿ ಸ್ವಲ್ಪ ಮಳೆಯಾದೂ ಕೂಡ ನೀರು ನಿಂತು ಹೊಳೆಯಂತಾಗುತ್ತೆ. ಹೀಗಾಗಿ ವಾಹನ ಸವಾರರು ಪರದಾಡಿದರು. ರಸ್ತೆ ಗುಂಡಿ ಸರಿಪಡಿಸುವಂತೆ ಹಲವು ಬಾರಿ ಪಾಲಿಕೆ ಅಧಿಕಾರಿಗ