ಶಿವಮೊಗ್ಗ: ಅಕ್ರಮ ಮರಳು ಗಣಿಗಾರಿಕೆ ಬೇಡರ ಹೊಸಳ್ಳಿ ಬಳಿ ಮರಳಿನ ಲಾರಿಗಳು ಹಾಗೂ ಟ್ರಾಕ್ಟರ್ ವಶ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ನವೀನ್ ಅವರ ನೇತೃತ್ವದಲ್ಲಿ ಭೂವಿಜ್ಞಾನಿಗಳಾದ ಅವಿನಾಶ್, ಜ್ಯೋತಿ, ರಶ್ಮಿ ಅವರನ್ನು ಒಳಗೊಂಡ ತಂಡದಿಂದ ಕಾರ್ಯಾಚರಣೆ ನಡೆಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ವ್ಯಾಪಕವಾದ ಆಕ್ರಮ ಮರಳುದಂದೆಗೆ ಬ್ರೇಕ್ ಹಾಕಲು ಮುಂದಾಗಿರುವ ಅಧಿಕಾರಿಗಳು ದಿನನಿತ್ಯ ಹಗಲು ರಾತ್ರಿ ಎನ್ನದೆ ಕಾರ್ಯಾಚರಣೆ ನಡೆಸಿ ಖಚಿತ ಮಾಹಿತಿಯ ಮೇರೆಗೆ ಪಿಳ್ಳಂಗೆರೆ, ಹೊಳೆಹೊನ್ನೂರು ಭಾಗದ ಅಕ್ರಮ ಮರಳು ಲಾರಿಗಳನ್ನು ವಶಕ್ಕೆ ಪಡೆದು ಸಂಬಂಧ ಪಟ್ಟ ಠಾಣೆಗೆ ಒಪ್ಪಿಸಿದ್ದಾರೆ. ಬೇಡರ ಹೊಸಳ್ಳಿಯಲ್ಲಿ ಒಂದು ಲಾರಿ ಹಾಗೂ ಒಂದು ಜೆಸಿಬಿಯನ್ನು ವಶಪಡಿಸಿಕೊಂಡು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.