ಕಮಲನಗರ: ಪಟ್ಟಣದ ತಾಲೂಕು ನ್ಯಾಯಾಲಯ ಸಂಕೀರ್ಣವನ್ನು ಪರಿಶೀಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ
ಕರ್ನಾಟಕದ ನ್ಯಾಯಮೂರ್ತಿ ಸಂಜು ಕುಮಾರ್ ಹಂಚಾಟೆ ಅವರು ಶನಿವಾರ ಮಧ್ಯಾಹ್ನ 1:30 ಕ್ಕೆ ಪಟ್ಟಣದ ತಾಲೂಕು ನ್ಯಾಯಾಲಯ ಸಂಕೀರ್ಣವನ್ನ ಪರಿಶೀಲಿಸಿದರು. ಈ ವೇಳೆ ಜಿಲ್ಲಾ ನ್ಯಾಯಾಧೀಶರು ವಕೀಲರು, ಗಣ್ಯರು ವಿಶೇಷವಾಗಿ ತಾಲೂಕು ದಂಡಾಧಿಕಾರಿಗಳು ಆದ ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ, ತಾಲೂಕ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹಣಮಂತರಾವ್ ಕೌಟಗೆ ಸೇರಿದಂತೆ ಅನೇಕ ಜನ ಪ್ರಮುಖರು ಹಾಜರಿದ್ದು ಸನ್ಮಾನಿಸಿ, ಗೌರವಿಸಿದರು.