ಯಲ್ಲಾಪುರ: ಗಾಂಧಿ ಕುಟೀರದಲ್ಲಿ ಸಂಕಲ್ಪ ಉತ್ಸವ ಕ್ಕೆ ಸ್ವರ್ಣವಲ್ಲಿ ಶ್ರೀ ಗಳಿಂದ ಚಾಲನೆ
ಯಲ್ಲಾಪುರ : ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವಲ್ಲಿ ಪಾಲಕರು ಹಿನ್ನಡೆಯುತ್ತಿರುವದರ ನಡುವೆ ಪ್ರಮೋದ ಹೆಗಡೆ ತಮ್ಮ ಮಕ್ಕಳನ್ನು ಅದರಿಂದ ವಿಮುಖರಾಗದಂತೆ ಸಂಕಲ್ಪ ಉತ್ಸವದಂತಹ ಸಾಂಸ್ಕೃತಿಕ ಪರಂಪರೆಯನ್ನು ತಮ್ಮ ಮುಂದಿನ ತಲೆಮಾರಿಗೆ ಹಸ್ತಾಂತರಿಸಿ ಮುನ್ನಡೆಸುತ್ತಿರುವದು ಅಭಿಮಾನದ ಸಂಗತಿ ಎಂದು ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿ ನುಡಿದರು.ಅವರು ಶುಕ್ರವಾರ ಸಂಜೆ ಪಟ್ಟಣದ ಗಾಂಧಿ ಕುಟೀರದಲ್ಲಿ ಆಯೋಜಿಸಲಾದ 39ನೇ ವರ್ಷದ ಸಂಕಲ್ಪ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.ಎಡನೀರು ಸಚ್ಚಿ ದಾನಂದ ಭಾರತೀ ಶ್ರೀ ಗಳು ಉಪಸ್ಥಿತರಿದ್ದರು.