ಕಲಬುರಗಿಯ ನೆಹರು ನಗರ ಅಂಗನವಾಡಿ ಕೇಂದ್ರದಲ್ಲೇ ಕುರ್ಚಿಯ ಮೇಲೆ ಕುಳಿತಿದ್ದಾಗ ಹಠಾತ್ ಕುಸಿದು ಬಿದ್ದು ಮೃತಪಟ್ಟ ಅಂಗನವಾಡಿ ಶಿಕ್ಷಕಿ ಮಲ್ಲಮ್ಮ (60) ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತಳ ಸಹೋಧರಿಯ ಮಗ ಬಸವರಾಜ ದಿವಟಾ ಅವರು ಚೌಕ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೃತ ಮಲ್ಲಮ್ಮ ಅವರ ಪತಿ ನಾಗರಾಜ 35 ವರ್ಷದ ಹಿಂದೆ ಸಾವನ್ನಪ್ಪಿದ್ದಾರೆ. ಕಳೆದ 30 ವರ್ಷಗಳಿಂದ ಮಲ್ಲಮ್ಮ ಅವರು ಕಲಬುರಗಿಯಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ 2023-24 ರಲ್ಲಿ ಹೃದಯಾಘಾತವಾಗಿದ್ದು, ಕೆಎಂಸಿ ಹುಬ್ಬಳ್ಳಿಯಲ್ಲಿ ಚಿಕಿತ್ಸೆ ಪಡೆದಿದ್ದರು. ಹೀಗಾಗಿ ಸಾವಿನಲ್ಲಿ ಯಾರ ಮೇಲೂ ಸಂಶಯ ಇಲ್ಲವೆಂದು ತಿಳಿಸಿದ್ದಾರೆ. ಈ ಬಗ್ಗೆ ಚೌಕ ಪೊಲೀಸರು ಯು.ಡಿ.ಆರ್. ಪ್ರಕರಣ ದಾಖಲಿಸಿಕೊಂಡು ಪ