ಹುಬ್ಬಳ್ಳಿ ವಾರ್ಡ್ ನಂಬರ್ 52ರಲ್ಲಿ ಬರುವ ಹೆಗ್ಗೆರಿ ಮಾರುತಿ ನಗರದ ಕೇಶವ ಕುಂಜ ಪಕ್ಕದ ಸ್ಮಾರ್ಟ್ ಸಿಟಿ ಮುಖ್ಯ ರಸ್ತೆ ಶ್ರೀ ಸ್ವಾಮಿ ವಿವೇಕಾನಂದ ಮಾರ್ಗದಲ್ಲಿ ನಡೆಯುತ್ತಿರುವ ಒಳಚರಂಡಿ ರಿಪೇರಿ ಕಾಮಗಾರಿಯನ್ನು ಹುಧಾಮಪಾ ಸದಸ್ಯರಾದ ಚೇತನ್ ಹಿರೇಕೆರೂರ ಅವರು ವೀಕ್ಷಿಸಿ ಆದಷ್ಟು ಬೇಗ ಸರಿಪಡಿಸಿ ಸರಿಯಾದ ರೀತಿಯಲ್ಲಿ ಕಾಮಗಾರಿಯನ್ನು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ತಿಳಿಸಿದರು. ಈ ಸಂದರ್ಭದಲ್ಲಿ ನನ್ನೊಂದಿಗೆ ಉತ್ತರ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರರು ವಿಠ್ಠಲ ತುಬಾಕಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಶ್ರೀಮತಿ ಲಕ್ಷ್ಮಿ ಕಾಂಬಳೆ, ಪಾಲಿಕೆಯ ಜೋನೆಲ್ 7ರ ಆಯುಕ್ತರು ಮಹಾಲಿಂಗ ಪಾಟೀಲ, ಕೆಲಸಗಾರರು, ಮಾರುತಿ ನಗರದ ನಾಗರೀಕರು ಉಪಸ್ಥಿತರಿದ್ದರು