ಕಲಬುರಗಿ : ಕೋಲಿ ಕಬ್ಬಲಿಗ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡುವಂತೆ ಒತ್ತಾಯಿಸಿ ಡಿಸೆಂಬರ್ 29 ರಂದು ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆಯೆಂದು ಜೆಡಿಎಸ್ ಮುಖಂಡ ಹಾಗೂ ಸಮಾಜದ ಮುಖಂಡರಾದ ಶಿವಕುಮಾರ್ ನಾಟಿಕಾರ್ ಹೇಳಿದ್ದಾರೆ.. ಡಿಸೆಂಬರ್ 26 ರಂದು ಮಧ್ಯಾನ 12 ಗಂಟೆಗೆ ಕಲಬುರಗಿಯಲ್ಲಿ ಮಾತನಾಡಿದ ಅವರು, ಅಂದು ನಗರದ ಜಗತ್ ವೃತ್ತದಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.. ಪ್ರತಿಭಟನೆಯಲ್ಲಿ ಬೀದರ್, ಕಲಬುರಗಿ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಂದ ಸಾವಿರಾರು ಸಮಾಜದ ಬಾಂಧವವರು ಭಾಗಿಯಾಗಲಿದ್ದಾರೆಂದು ಶಿವಕುಮಾರ್ ನಾಟಿಕರ್ ಹೇಳಿದ್ದಾರೆ..