ನಂಜನಗೂಡು: ಧರ್ಮದ ಕಾಲಂನಲ್ಲಿ ಬೌದ್ಧ, ಜಾತಿಯ ನಮೂದಿಸಿ:ಪಟ್ಟಣದಲ್ಲಿ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ ಕರೆ
ರಾಜ್ಯ ಸರಕಾರದ ಆದೇಶದಂತೆ ಸೋಮವಾರದಿಂದ ಆರಂಭವಾಗಲಿರುವ ಜಾತಿಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಬೌದ್ಧ ಧರ್ಮವೆಂದು, ಜಾತಿಯ ಕಾಲಂನಲ್ಲಿ ಹೊಲೆಯ ಎಂದು ನಮೂದಿಸುವಂತೆ ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಕರೆ ನೀಡಿದರು. ನಂಜನಗೂಡು ನಗರದ ಅಂಬೇಡ್ಕರ್ ಭವನದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರು ನಡೆಸಿದ ತುರ್ತು ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು .