ಕಲಬುರಗಿ: ನಗರದಲ್ಲಿ ರೈತರ ದುಂಡು ಮೇಜಿನ ಸಭೆ: ಬೇಡಿಕೆ ಈಡೆರದಿದ್ದರೆ ಕಲ್ಯಾಣ ಕರ್ನಾಟಕ ಬಂದ್ ಮಾಡಲು ನಿರ್ಧಾರ
ಅತಿವೃಷ್ಟಿ ಹಾಗೂ ಪ್ರವಾಹದಿಂದ ಆಗಿರುವ ಹಾನಿ ವಿಚಾರವಾಗಿ ನಗರದಲ್ಲಿ ವಿವಿಧ ರೈತಪರ ಸಂಘಟನೆಗಳ ನೇತೃತ್ವದಲ್ಲಿ ರೈತರ ದುಂಡು ಮೇಜಿನ ಸಭೆ ಕರೆಯಲಾಗಿತ್ತು. ಹೊಸಾ ಐವಾನ್ ಶಾಹಿ ಸಭಾಂಗಣದಲ್ಲಿ 3 ಗಂಟೆ ಸುಮಾರಿಗೆ ನಡೆದ ಸಭೆಯಲ್ಲಿ ರೈತ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಸೇರಿ ಅನೇಕರು ಪಾಲ್ಗೊಂಡಿದ್ದರು. ಕೂಡಲೆ ಹಸಿ ಬರಗಾಲ ಘೋಷಣೆ, ರಾಷ್ಟ್ರಿಯ ವಿಪತ್ತು ಘೊಷಣೆ ಮಾಡಿ ಪರಿಹಾರ, ಉಭಯ ಸರ್ಕಾರ ಜಂಟಿಯಾಗಿ ರೈತರ ಸಾಲ ಮನ್ನಾ ಮಾಡುವದು,ಅತಿವೃಷ್ಟಿ ಪರಿಹಾರ, ಹಿಂಗಾರು ಬಿತ್ತನೆಗಾಗಿ ರೈತರಿಗೆ ಉಚಿತವಾಗಿ ಬಿಜ ರಸಗೊಬ್ಬರ ವಿತರಣೆ, ನಿರಂತರ ಮಳೆಯಿಂದ ಹದಗೆಟ್ಟ ರಸ್ತೆಗಳ ದುರಸ್ತಿ, ಬಡವರ ಮನೆಗಳು ಮುಳುಗಡೆ ಪ್ರದೇಶ ಶಾಶ್ವತವಾಗಿ ಪರಿಹಾರಕ್ಕೆ ಸರ್ಕಾರಗಳ ಮೇಲೆ ಒತ್ತಡ ತರಲ