ಕುಮಟಾ: ಮುಖ್ಯಾಧಿಕಾರಿ ಮೇಲೆ ಕಿರುಕುಳ ಆರೋಪ ಮಾಡಿ ನಾಪತ್ತೆಯಾಗಿದ್ದ ಪುರಸಭೆ ಸಿಬ್ಬಂದಿ ಪತ್ತೆ
ಕುಮಟಾ: ಪುರಸಭೆಯ ಮುಖ್ಯಾಧಿಕಾರಿ ಯ ಕಿರುಕುಳದ ಕುರಿತು ಪತ್ರ ಬರೆದು ನಾಪತ್ತೆಯಾಗಿದ್ದ ಸಿಬ್ಬಂದಿಯೊಬ್ಬರು ಗುರುವಾರ ಬೆಳಗಾವಿಯಲ್ಲಿ ಪತ್ತೆಯಾಗಿದ್ದಾರೆ. ಕುಮಟಾ ಪುರಸಭೆಯಲ್ಲಿ ಆರ್.ಐ. (ರೆವಿನ್ಯೂ ಇನ್ಸ್ಪೆಕ್ಟರ್) ಆಗಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ ಆರ್ ಅವರು ಭಟ್ಕಳದಲ್ಲಿರುವ ತಮ್ಮ ಮನೆಯಿಂದ ನಾಪತ್ತೆಯಾಗಿದ್ದರು. ನಾಪತ್ತೆಯಾಗುವುದಕ್ಕೂ ಮುನ್ನ ವೆಂಕಟೇಶ ಆರ್. ಅವರು, ಅನಧಿಕೃತ ಕಟ್ಟಡಕ್ಕೆ ಅನುಮತಿ ನೀಡುವಂತೆ ಮುಖ್ಯಾಧಿಕಾರಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.