ಚಿತ್ರದುರ್ಗ: ಉತ್ತಮ ಆಲೋಚನಾ ಕ್ರಮದಿಂದ ಯಶಸ್ವಿ; ನಗರದಲ್ಲಿ ಪ್ರಾಂಶುಪಾಲ ಪಿ.ಬಿ.ಭರತ್
ಜಾಗತೀಕರಣದಲ್ಲಿ ಒಬ್ಬ ವ್ಯಕ್ತಿ ಉತ್ತಮ ಯಶಸ್ವಿ ಉದ್ಯಮಿಯಾಗಲೂ ಸ್ವಂತ ಜ್ಞಾನ ಹಾಗೂ ಆಲೋಚನಾ ಕ್ರಮ ತುಂಬಾ ಸಹಕಾರಿ ಎಂದು ಚಿತ್ರದುರ್ಗ ಎಸ್.ಜೆ.ಎಂ.ಐ.ಟಿ ಇಂಜಿನಿಯರ್ ಕಾಲೇಜಿನ ಪ್ರಾಂಶುಪಾಲ ಪಿ.ಬಿ. ಭರತ್ ಹೇಳಿದರು. ನಗರದ ಎಸ್.ಜೆ.ಎಂ ಪಾಲಿಟೆಕ್ನಿಕ್ ಕಾಲೇಜು ಆವರಣದಲ್ಲಿ ಗುರುವಾರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕೆ ಕೇಂದ್ರ ಹಾಗೂ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಮತ್ತು ಅಡ್ವಟೈಸಿಂಗ್ ಲಿಮಿಟೆಡ್ ಹಾಗೂ ಎಸ್.ಜೆ.ಎಂ ಪಾಲಿಟೆಕ್ನಿಕ್ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಒಂದು ದಿನದ ಇನ್ಕ್ಯೂಬೇಷನ್ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ ಯಾವುದೇ ಒಬ್ಬ ವ್ಯಕ್ತಿ ಎಷ್ಟೇ ದೊಡ್ಡ ಹುದ್ದೆಯಲ್ಲಿದ್ದರೂ ಅದು ಕೇವಲ ಒಂದು ನೌಕರಿ, ಕೆಲಸವಾಗಿರುತ್ತದೆ ಎಂದರು.