ಯಲ್ಲಾಪುರ: ನ.4 ಕ್ಕೆ ಪರ್ತಗಾಳಿ ಜೀವೋತ್ತಮ ಮಠದ ಶ್ರೀರಾಮ ದಿಗ್ವಿಜಯ ರಥ ಯಲ್ಲಾಪುರಕ್ಕೆ ಆಗಮನ
ಯಲ್ಲಾಪುರ : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠವು ಸ್ಥಾಪನೆಯಾಗಿ 550 ವರ್ಷಗಳನ್ನು ಪೂರೈಸಿದ ಸವಿನೆನಪಿನಲ್ಲಿ ಸಂಸ್ಥಾನದ ಆರಾಧ್ಯ ದೇವತೆಯಾದ ಶ್ರೀರಾಮ ದೇವರ 77 ಅಡಿ ಎತ್ತರದ ಕಂಚಿನ ಪ್ರತಿಮೆ ಪರ್ತಗಾಳಿಯಲ್ಲಿ ಅನಾವರಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಬದರಿಕಾಶ್ರಮದಿಂದ ಹೊರಟ ಭವ್ಯವಾದ ಸಾಲಂಕೃತ ರಥವು ಹಲವು ರಾಜ್ಯಗಳನ್ನು ಸಂಚರಿಸಿ, ನ.4ರಂದು ಸಂಜೆ 4.30 ಗಂಟೆಗೆ ಯಲ್ಲಾಪುರ ಪಟ್ಟಣಕ್ಕೆ ಆಗಮಿಸಲಿದೆ.ಪಟ್ಟಣದ ಗ್ರಾಮದೇವಿ ದೇವಾಲಯದಿಂದ ಪೂರ್ಣಕುಂಭಸ್ವಾಗತದೊಂದಿಗೆ ರಥಯಾತ್ರೆ ಆರಂಭವಾಗಿ ವೆಂಕಟರಮಣ ಮಠದ ವರೆಗೆ ಭವ್ಯ ಮೆರವಣಿಗೆ ನಡೆಯಲಿದೆ.