ಉರುಳು ಹಾಕಿ ಪ್ರಾಣಿ ಬಲಿ ಪಡೆಯುತ್ತಿರುವವರ ವಿರುದ್ಧ ಕಠಿಣ ಕ್ರಮಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅರಣ್ಯಾಧಿಕಾರಿಗಳಿಗೆ ಬುಧವಾರ ಸಂಜೆ 5 ಗಂಟೆಗೆ ಸೂಚನೆ ನೀಡಿದ್ದಾರೆ. ಶಿವಮೊಗ್ಗ ಜಿಲ್ಲೆಯ ವನ್ಯಜೀವಿ ವಿಭಾಗಗಳಲ್ಲಿ ಕಳೆದ 7 ತಿಂಗಳುಗಳಲ್ಲಿ 11 ಕರಡಿ ಮತ್ತು 4 ಚಿರತೆಗಳು ಅಕ್ರಮವಾಗಿ ಅಳವಡಿಸಿದ್ದ ಉರುಳಿಗೆ ಸಿಲುಕಿ ಸಾವನಪ್ಪಿವೆ. ಈ ಪೈಕಿ 3 ಕರಡಿ ಹಾಗೂ 2 ಚಿರತೆಗಳು ಮೃತಪಟ್ಟಿರುವ ವಿಚಾರ ವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಆನೆ ಕಂದಕಗಳ ಬಳಿ ಬೆಳೆದ ಹುಲ್ಲಿನ ನಡುವೆ ಉರುಳು ಅಳವಡಿಸಿ ಕಳ್ಳಬೇಟೆ ಪ್ರಯತ್ನ ನಡೆಯುತ್ತಿದ್ದು ಇದರಿಂದ ವನ್ಯಜೀವಿಗಳು ಸಂಕಷ್ಟಕ್ಕೆ ಸಿಲುಕುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.