ಮುಂಡಗೋಡ: ಮುಂಡಗೋಡದಲ್ಲಿ ಕಾಣೆಯಾಗಿದ್ದ ಚಿನ್ನಾಭರಣವಿದ್ದ ಬ್ಯಾಗ್ ಯಲ್ಲಾಪುರದಲ್ಲಿ ಪತ್ತೆ,
ಮುಂಡಗೋಡ : ಮುಂಡಗೋಡನಲ್ಲಿ ಕಾಣೆಯಾಗಿದ್ದ ಚಿನ್ನ ಹಾಗೂ ಬೆಳ್ಳಿ ಆಭರಣಗಳಿದ್ದ ಬ್ಯಾಗ್ ನ್ನು ಯಲ್ಲಾಪುರದಲ್ಲಿ ಸಿಕ್ಕಿದ್ದು ಪೊಲೀಸರು ಬ್ಯಾಗ್ ಕಳೆದುಕೊಂಡವರಿಗೆ ಹಸ್ತಾಂತರಿಸಿದ ಘಟನೆ ಜರುಗಿದೆ. ಮುಂಡಗೋಡ ತಾಲೂಕಿನ ಕೆಂದಲಗೇರಿ ಗ್ರಾಮದ ರೇಷ್ಮಾಬಾನು ಹುಸೇನಸಾಬ ಅವರು ದಿ.4ರಂದು ತಮ್ಮ ಬ್ಯಾಗನ್ನು ಮುಂಡಗೋಡ ಬಸ್ ನಿಲ್ದಾಣದಲ್ಲಿ ಕಳೆದುಕೊಂಡಿದ್ದರು. ಬಂಗಾರ ಹಾಗೂ ಬೆಳ್ಳಿ ಆಭರಣಗಳು ಈ ಬ್ಯಾಗ್ ನಲ್ಲಿ ಇತ್ತು. ಬ್ಯಾಗ್ ಕಾಣೆಯಾದ ಬಗ್ಗೆ ರೇಷ್ಮಾಬಾನು ಅವರು ಪೊಲೀಸ್ ದೂರು ನೀಡಿದ್ದರು.