ಚಿಕ್ಕಬಳ್ಳಾಪುರ: ರಭಸವಾಗಿ ಹರಿಯುತ್ತಿದ್ದ ನದಿಯ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ ಮುಂದೆ ಏನಾಯ್ತು..!
ಚಿಕ್ಕಬಳ್ಳಾಪುರದ ಹಲವೆಡೆ ಕಳೆದ ದಿನಗಳಿಂದ ಮಳೆಯಾಗುತ್ತಿದ್ದು, ಕುಶಾವತಿ ನದಿ ಮೈದುಂಬಿ ಹರಿಯುತ್ತಿದೆ. ಈ ವೇಳೆ ಹರಿಯುತ್ತಿರುವ ನೀರಿನ ಮಧ್ಯೆ ಕ್ಯಾಂಟರ್ ಕೆಟ್ಟುನಿಂತ ಪರಿಣಾಮ, ಚೇಳೂರು ತಾಲ್ಲೂಕಿನ ಪೆದ್ದೂರು ಗುಂಡ್ಲಹಳ್ಳಿ ಗ್ರಾಮದ ವಿಜಯ್ ವಾಹನದಿಂದ ಇಳಿದಿದ್ದಾರೆ. ಇದೆ ವೇಳೆ ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನದಿಯ ನೀರಿನ ರಭಸಕ್ಕೆ ಅವರು ಕೊಚ್ಚಿಹೋಗಿದ್ದು, ಕೊಂಬೆಯೊಂದನ್ನು ಹಿಡಿದು ಜೀವ ಉಳಿಸಿಕೊಂಡಿದ್ದಾರೆ. ಇದನ್ನು ಗಮನಿಸಿರುವ ಹೊಸಹುಡ್ಯ ಗ್ರಾಮಸ್ಥರು, ಕೂಡಲೇ ಜೆಸಿಬಿ ಮೂಲಕ ಚಾಲಕನ ರಕ್ಷಣೆ ಮಾಡಿದ್ದಾರೆ.