ಕುಂದಗೋಳ: ಮಳೆಯಿಂದ ಕೊಚ್ಚಿಕೊಂಡು ಹೋದ ಗುಡೇನಕಟ್ಟಿ ಗ್ರಾಮದ ರಸ್ತೆ ಸೇತುವೆ
ಕುಂದಗೋಳ ತಾಲೂಕಿನ ಗುಡೇನಕಟ್ಟಿ ರಸ್ತೆ ಯ ಸೇತುವೆ ಬುಧವಾರ ಸುರಿದ ಭಾರಿ ಮಳೆಗೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ ಈ ರಸ್ತೆಯಿಂದ ರೈತಾಪಿ ವರ್ಗವು ಕೃಷಿ ಚಟುವಟಿಕೆ ಮಾಡಲು ತುಂಬಾ ತೊಂದರೆಯಾಗುತ್ತಿದ್ದು ಕೂಡಲೇ ದುರಸ್ತಿ ಕಾರ್ಯ ಮಾಡಬೇಕೆಂದು ರೈತ ಮುಖಂಡ ಬಸವರಾಜ್ ಆಗ್ರಹಿಸಿದ್ದಾರೆ. ಗುರುವಾರ ಮಾತನಾಡಿದ ಅವರು. ಗುಡೇನಕಟ್ಟಿ ಗ್ರಾಮ ಪಂಚಾಯತಿಗೆ ಯರಿ ನಾರಾಯಣಪುರ ಸಾರ್ವಜನಿಕರು ದಿನನಿತ್ಯ ಇದೇರಸ್ತೆ ಮಾರ್ಗವಾಗಿ ಓಡಾಡುತ್ತಿದ್ದರು ಅವರಿಗೂ ತುಂಬಾ ತೊಂದರೆಯಾಗಿದ್ದು ಕೂಡಲೇ ಸಂಬಂಧಪಟ್ಟ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ತುತ್ತು ಹೋದ ಸೇತುವೆಗಳನ್ನು ದುರಸ್ತಿ ಮಾಡಿ ರೈತರಿಗೆ ಬಿತ್ತನೆ ಮಾಡಲು ಅನುಕೂಲ ಮಾಡಿಕೊಡಬೇಕೆಂದರು.