ಯಲ್ಲಾಪುರ :ಪಟ್ಟಣದ ತಾಲೂಕಾ ಪಂಚಾಯತ ಸಮೀಪದ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ. ತಾಲೂಕಾ ಪಂಚಾಯತ ಎದುರಿಗೆ ಸೀತಾಲಕ್ಷ್ಮೀ ಮೆಡಿಕಲ್ಸ್, ಹಾಗೂ ಅದರ ಎದುರಿಗಿರುವ ಶಂಕರ್ ಸ್ವೀಟ್ಸ್ ಎಂಬ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ.ಬೀಗ ಮುರಿದು ಒಳನುಗ್ಗಿರುವ ಕಳ್ಳರು ಮೆಡಿಕಲ್ಸ್ ನಲ್ಲಿ ಇದ್ದ 40 ಸಾವಿರ ರೂಗಿಂತ ಹೆಚ್ಚಿನ ಹಣ ಕದ್ದೊಯ್ದಿದ್ದಾರೆ. ಬೇಕರಿಯಿಂದಲೂ ಕೆಲ ಸಾಮಗ್ರಿಗಳನ್ನು ಹಾಗೂ ಹಣವನ್ನು ಕದ್ದಿದ್ದಾರೆ. ಅಂಗಡಿಯ ಬಾಗಿಲು ತೆರೆದಿರುವುದನ್ನು ಗಮನಿಸಿದ ಸ್ಥಳೀಯರು, ಅಂಗಡಿ ಮಾಲೀಕರಿಗೆ ಮಾಹಿತಿ ನೀಡಿದ್ದಾರೆ. ಮಾಲೀಕರು ಸ್ಥಳಕ್ಕೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.