ಅನಂತ ಪ್ರೇರಣಾ ಕೇಂದ್ರ ಹುಬ್ಬಳ್ಳಿಯಲ್ಲಿ ನಡೆದ "ಕಮಲಸಖಿ ಬೈಠಕ್" ಎಂಬ ಸಂವಾದದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಧರ್ಮಪತ್ನಿ ಡಾ.ಮಲ್ಲಿಕಾ ನಡ್ಡಾ ಅವರೊಂದಿಗೆ ಹುಧಾಮಪಾ ಮೇಯರ್ ಜ್ಯೋತಿ ಪಾಟೀಲ್ ಅವರು ಭಾಗಿಯಾಗಿದ್ದರು. ಗ್ರಾಮೀಣ ಭಾಗದಿಂದ ಬಂದ ಮಹಿಳೆಯರಿಗೆ ಸಾಮಾಜಿಕ ಮೌಲ್ಯಗಳ ಹಾಗೂ ವ್ಯಕ್ತಿ ನಿರ್ಮಾಣ, ಸಾಮಾಜಿಕ ನಿರ್ಮಾಣದಿಂದ ದೇಶ ನಿರ್ಮಾಣದ ಬಗ್ಗೆ ಡಾ.ಮಲ್ಲಿಕಾ.ನಡ್ಡಾ ಅವರು ತಿಳಿಸಿದರು. ಈ ಸಂವಾದದಲ್ಲಿ ಅದಮ್ಯ ಚೇತನ ಸಂಸ್ಥಾಪಕರಾದ ತೇಜಸ್ವಿನಿ ಅನಂತಕುಮಾರ, ಶ್ರೀಮತಿ ಭಾರತಿ ನಂದಕುಮಾರ, ಶಿಲ್ಪಾ.ಶೆಟ್ಟರ, ರಾಜೇಶ್ವರಿ.ಸಾಲಗಟ್ಟಿ, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.