ತರೀಕೆರೆ ತಾಲೂಕಿನ ಬೈರಾಪುರ ಗ್ರಾಮದಲ್ಲಿ ಚಿರತೆಯೊಂದು ಬಾಲಕನೋರ್ವನ ಮೇಲೆ ಶುಕ್ರವಾರ ಸಂಜೆ 5 ಗಂಟೆಗೆ ದಾಳಿ ನಡೆಸಿದೆ. ಯುವಕನನ್ನ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೊನ್ನೆ ತರೀಕೆರೆ ತಾಲೂಕು ಬೈರಾಪುರದಲ್ಲಿ ಕರಡಿಯೊಂದು ತಂದೆಯೊಂದಿಗೆ ಐದು ವರ್ಷದ ಮಗು ನಡೆದುಕೊಂಡು ಹೋಗುವಾಗ ದಿಡೀರ್ ಎಂದು ಬಂದ ಕರಡಿಯೊಂದು ಮಗುವನ್ನ ಕಿತ್ತುಕೊಂಡು ಹೋಗಿ ಸಾವಿಗೆ ಕಾರಣವಾಗಿತ್ತು. ಈ ಘಟನೆ ಮರೆಯುವ ಮುಂಚೆಯೇ ಮತ್ತೊಂದು ಕಾಡುಪ್ರಾಣಿಯ ದಾಳಿ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.