ಶಿರಸಿ: ಅಬ್ಬರದ ಮಳೆಗೆ ದೇವನಿಲಯದಲ್ಲಿ ಮನೆ ಕುಸಿತ : ಶಾಸಕ ಭೀಮಣ್ಣ ಭೇಟಿ
ಶಿರಸಿ : ಅಬ್ಬರದ ಮಳೆಗೆ ತಾಲೂಕಿನ ಇಸಳೂರು ಗ್ರಾಪಂ ವ್ಯಾಪ್ತಿಯ ದೇವನಿಲಯದಲ್ಲಿ ಮನೆಯೊಂದರ ಮೇಲ್ಚಾವಣಿ ಹಾಗೂ ಗೋಡೆ ಕುಸಿದು ಬಿದ್ದಿದೆ. ವಿಷಯ ತಿಳಿದ ತಕ್ಷಣ ಶಾಸಕ ಭೀಮಣ್ಣ ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿ ತುರ್ತು ಸಹಾಯ ಒದಗಿಸಿದ್ದಾರೆ. ಸಾವಿತ್ರಿ ನಾರಾಯಣ ಮೊಗೆರ್ ಇವರಿಗೆ ಸೇರಿದ ಮನೆಯಾಗಿದ್ದು ಇವರು ಮನೆಯಲ್ಲಿ ವಾಸವಾಗಿದ್ದ ಸಂದರ್ಭದಲ್ಲಿಯೇ ಶುಕ್ರವಾರ ಮದ್ಯರಾತ್ರಿ ಸುಮಾರಿಗೆ ಮನೆಯ ಮೇಲ್ಚಾವಣಿ ಮತ್ತು ಗೋಡೆ ಕುಸಿದು ಹಾನಿ ಉಂಟಾಗಿದೆ. ಸುದ್ದಿ ತಿಳಿದ ಗ್ರಾಪಂ ಸದಸ್ಯ ನವೀನ ಶೆಟ್ಡಿ ಸ್ಥಳಕ್ಕೆ ಬೇಟಿ ನೀಡಿ ಸಂಬಂಧಿಸಿದ ಅದಿಕಾರಿಗಳ ಗಮನಕ್ಕೆ ತಂದಿದ್ದಾರೆ.ಬಳಿಕ ಶಾಸಕರು ಭೇಟಿ ನೀಡಿ ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು