ಹೆಬ್ರಿ: ಪಟ್ಟಣದ ನೆಲ್ಲಿಕಟ್ಟೆ ಕ್ರಾಸ್ ಬಳಿ ಸ್ಕಾರ್ಪಿಯೋ ಕಾರ್ ಪಲ್ಟಿ, ಐವರಿಗೆ ಗಂಭೀರ ಗಾಯ
Hebri, Udupi | Mar 31, 2024 ಸ್ಕಾರ್ಪಿಯೋ ಕಾರ್ ಪಲ್ಟಿಯಾಗಿ ಐವರಿಗೆ ಗಂಭೀರವಾದ ಗಾಯಗೊಂಡಿರುವ ಘಟನೆ ಪಟ್ಟಣದ ನೆಲ್ಲಿಕಟ್ಟೆ ಕ್ರಾಸ್ ಬಳಿ ನಡೆದಿದೆ. ಕಾರಿನಲ್ಲಿದ್ದ 5 ಜನರು ಮಣಿಪಾಲದಿಂದ ರೆಂಟೆಡ್ ಕಾರ್‌ನಲ್ಲಿ ಉಡುಪಿ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾದ ಕೂಡ್ಲು ಫಾಲ್ಸ್‌ಗೆ ಬರುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ನೆಲ್ಲಿಕಟ್ಟೆ ಕ್ರಾಸ್ ಬಳಿ ಕಾರು ಪಲ್ಟಿಯಾಗಿದೆ. ಇನ್ನು ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.