ಹೆಗ್ಗಡದೇವನಕೋಟೆ: ದಮ್ಮನಕಟ್ಟೆಯಲ್ಲಿ ಮಕ್ಕಳ ಜೊತೆ ಆಟ ಆಡಿದ ತಾಯಿ ಹುಲಿ
ಜಿಲ್ಲೆಯ ಹೆಚ್.ಡಿ ಕೋಟೆ ತಾಲ್ಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವದ ದಮ್ಮನಕಟ್ಟೆ ಸಫಾರಿಯಲ್ಲಿ ತಾಯಿ ಹುಲಿ ಮಕ್ಕಳ ಜೊತೆಗೆ ಆಟವಾಡುತ್ತಿರುವ ಸುಂದರ ದೃಶ್ಯ ಸೆರೆಯಾಗಿದೆ. ಅಂತರಸಂತೆ ದಮ್ಮನಕಟ್ಟೆ ಸಫಾರಿ ಕೇಂದ್ರದ ವ್ಯಾಪ್ತಿಯ ನಾಯಂಜಿ ಕಟ್ಟೆ ಬಳಿ ತಾಯಿ ಹುಲಿ ತನ್ನ ಎರಡು ಮರಿಗಳೊಂದಿಗೆ ನಡೆದು ಹೋಗುತ್ತಿರುವುದು ಮತ್ತು ತಾಯಿ ಹುಲಿ ಮರಿಗಳ ಜೊತೆಗೂಡಿ ಆಟವಾಡುತ್ತಿರುವ ದೃಶ್ಯ ವನ್ನು ಸಫಾರಿಗೆ ಬಂದಿದ್ದ ಪ್ರವಾಸಿಗರು ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸಂಭ್ರಮಿಸಿದ್ದಾರೆ.