ಹುಮ್ನಾಬಾದ್: ಧುಮ್ಮನಸೂರಿನಲ್ಲಿ ಶ್ರದ್ಧಾ ಭಕ್ತಿಯ ರೇವಪ್ಪಯ್ಯ ಮುತ್ಯಾ ದೇವಸ್ಥಾನ ಕಳಸಾರೋಹಣ ಸಾರೋಟದಲ್ಲಿ ಶ್ರೀಗಳ ಭವ್ಯ ಮೆರವಣಿಗೆ
ತಾಲೂಕಿನ ಇತಿಹಾಸ ಪ್ರಸಿದ್ಧ ಧುಮ್ಮನಸೂರು ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ 2:30ಕ್ಕೆ ರೇವಪ್ಪಯ್ಯ ಮುತ್ಯ ದೇವಸ್ಥಾನದ ಕಳಸರೋಹಣ ಕಾರ್ಯಕ್ರಮ ಅತ್ಯಂತ ಶ್ರದ್ಧಾ ಭಕ್ತಿಯಿಂದ ನಡೆಯಿತು. ಹುಡುಗಿ ಹಿರೇಮಠದ ಪೂಜಾ ವಿರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ ರಾಜೇಶ್ವರ ಘನಲಿಂಗ ರುದ್ರಮುನಿ ಸ್ವಾಮೀಜಿ ಅವರನ್ನ ಸಾರೋಟದಲ್ಲಿ ಭವ ಮೆರವಣಿಗೆಯಲ್ಲಿ ಕರೆತರಲಾಯಿತು. ಮಾತೇರು ತುಂಬಿದ ಕಳಶ ಹೊತ್ತು ನಡೆಸಿದ ಶುಭ ಯಾತ್ರೆ , ಮೆರವಣಿಗೆ ಮೆರಗು ಹೆಚ್ಚಿಸಿತು.