ಕುರುಗೊಡು: ಅಲೆಮಾರಿ ಸಮುದಾಯಗಳಿಗೆ ಶಾಶ್ವತ ನೆಲೆ, ನಗರದಲ್ಲಿ ಶಾಸಕ ಗಣೇಶ್ ಭರವಸೆ
ನ.19,ಬುಧವಾರ ಮಧ್ಯಾಹ್ನ 12ಗಂಟೆಗೆ ಕುರುಗೋಡಿನಲ್ಲಿ ಆಯೋಜಿಸಲಾಗಿದ್ದ ತಾಡಪಾಲ್ ವಿತರಣೆ ಕಾರ್ಯಕ್ರಮದಲ್ಲಿ ಶಾಸಕ ಗಣೇಶ್ ರವರು ಭಾಗವಹಿಸಿ, ಮಾತನಾಡಿದ ಅವರು— ಮಳೆ ಹಾಗೂ ಚಳಿಗಾಲದಲ್ಲಿ ತಾತ್ಕಾಲಿಕ ಆಶ್ರಯಕ್ಕಾಗಿ ತಾಡಪಾಲ್ಗಳನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರ್ಕಾರದ ಮೂಲಕ ಸೈಟ್ ಮತ್ತು ಶಾಶ್ವತ ಮನೆ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಹಕ್ಕಿಪಿಕ್ಕಿ, ಸಿಂದೋಳ್ಳೋ, ಡೊಂಗ್ರಿಗರಾಶಿ, ಶಿಲೆಕ್ಯಾತ, ಸುಡುಗಾಡು ಸಿದ್ದ, ಬುಡಗ ಜಂಗಮ, ಹಂಡಿ ಜೋಗಿ ಸೇರಿದಂತೆ ಅನೇಕ ಅಲೆಮಾರಿ ಜಾತಿ ಕುಟುಂಬಗಳು ತಾಡಪಾಲ್ ಪಡೆದುಕೊಂಡವು.