ಶಿವಮೊಗ್ಗ: ಡಿಕೆಶಿ ಅಂತವರು ಸಿಎಂ ಆಗಬಾರದು:ನಗರದಲ್ಲಿ ಎಂಎಲ್ಸಿ ಡಿ.ಎಸ್.ಅರುಣ್
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಅಂತವರು ಸಿಎಂ ಆಗಬಾರದು ಎಂದು ಶಿವಮೊಗ್ಗದಲ್ಲಿ ಎಂಎಲ್ಸಿ ಡಿ.ಎಸ್. ಅರುಣ್ ಹೇಳಿದ್ದಾರೆ.ಶನಿವಾರ ಸುದ್ದಿಗಾರರೊಂದಿಗೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು ಎರಡುವರೆ ವರ್ಷದಿಂದ ಸರ್ಕಾರ ಒಂದಲ್ಲ ಒಂದು ಗೊಂದಲ ಸೃಷ್ಟಿಸುತ್ತಿದೆ. ಅಭಿವೃದ್ಧಿ ಬಗ್ಗೆ ಯಾರು ಮಾತನಾಡಬೇಡಿ ಅಭಿವೃದ್ಧಿ ವಿಷಯ ಡೈವರ್ಟ್ ಮಾಡಲು ಇದನ್ನ ಮಾಡ್ತಾರೆ.ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಅಂತವರು ಸಿಎಂ ಆಗಬಾರದು. ಅವರು ಸಿಎಂ ಆಗಬಾರದು. ಆಗಲ್ಲ. ಆಗುವಂತಹ ಸಂದರ್ಭ ಬಂದ್ರೆ ಸಿದ್ದರಾಮಯ್ಯ ಕಾಂಗ್ರೆಸ್ ಮುಕ್ತ ಮಾಡ್ತಾರೆ ಎಂದಿದ್ದಾರೆ.