ಕಲಬುರಗಿ : ಕಲಬುರಗಿ ಜಿಲ್ಲೆ ಶಹಬಾದ್ ಮೂಲದ ಅಂಜಲಿ ಕಂಬಾನುರ್‌ರನ್ನ ಯಾದಗಿರಿಯಲ್ಲಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆಗೆ ಸಂಬಂಧಿಸಿದಂತೆ, ನಾಲ್ವರು ಹಂತಕರನ್ನ ಯಾದಗಿರಿ ಪೊಲೀಸರು ವಿಜಯಪುರದಲ್ಲಿ ಬಂಧಿಸಿದ್ದಾರೆ. ನ15 ರಂದು ಬೆಳಗ್ಗೆ 9 ಗಂಟೆಗೆ ಮಾಹಿತಿ ಲಭ್ಯವಾಗಿದೆ.. ಚಿತ್ತಾಪುರ ಮೂಲದ ಯಲ್ಲಪ್ಪ, ಕಾಶಿನಾಥ್, ದತ್ತಾತ್ರೇಯ, ಜಗದೀಶ್ ಬಂಧಿತರು..ಇನ್ನೂ ಅಂಜಲಿ ಪತಿ ಗಿರೀಶ್ ಕಂಬಾನುರ್‌ರನ್ನ 2022 ರಲ್ಲಿ ಹತ್ಯೆ ಮಾಡಲಾಗಿತ್ತು. ಬಳಿಕ ಹಳೆ ವೈಷಮ್ಯ ಮುಂದುವರಿದು ಇದೀಗ ಪತ್ನಿ ಅಂಜಲಿಯನ್ನ ಸಹ ಭೀಕರವಾಗಿ ಹತ್ಯೆ ಮಾಡಲಾಗಿದೆ..