ಶಿವಮೊಗ್ಗ: ಅಯ್ಯಪ್ಪ ಮಾಲಾಧಾರಿಗಳ ಸಮಯ ಪ್ರಜ್ಞೆಯಿಂದ ಉಳಿತು ಯುವಕನ ಜೀವ, ಶಿವಮೊಗ್ಗದಲ್ಲಿ ಚಾನೆಲ್ ಗೆ ಹಾರಿದ ಯುವಕ ಬದುಕಿದ್ದು ಹೇಗೆ
ಶಿವಮೊಗ್ಗದ ಗೋಪಾಳದಲ್ಲಿರುವ ಗುಡ್ ಶೆಫರ್ಡ್ ಚರ್ಚ್ ಬಳಿಯ ಚಾನೆಲ್ ಗೆ ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದು ಆತನನ್ನ ಅಗ್ನಿಶಾಮಕ ದಳದ ಸಿಬ್ಬಂದಿ ಗುರುವಾರ ಸಂಜೆ 4 ಗಂಟೆಗೆ ರಕ್ಷಿಸಿದ್ದಾರೆ. 24 ವರ್ಷದ ಯುವಕನೋರ್ವ ಚಾನೆಲ್ ಗೆ ಹಾರಿದ್ದು ಅಯ್ಯಪ್ಪಸ್ವಾಮಿ ಮಲಾಧಾರಿಗಳು ಇದನ್ನ ನೋಡಿ ಅಗ್ನಿಶಾಮಕದಳದವರಿಗೆ ಕರೆ ಮಾಡಿದ್ದಾರೆ. ಅಗ್ನಿಶಾಮಕದಳದ ಡಿಎಫ್ಒ ಅಶೋಕ್ ಕುಮಾರ್ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆದಿದೆ. ಚಾನೆಲ್ ಗೆ ಬಿದ್ದ ಯುವಕನನ್ನ ರಕ್ಷಿಸಾಗಿದೆ. ಇವರ ತಂದೆ ಪ್ರತಿಷ್ಠಿತ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದು ಅವರ ಜೊತೆಯಲ್ಲೇ ಇದ್ದ ಮಗ ಇಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ದೋಣಿ ಹಾಗೂ ರೆಸ್ಕ್ಯು ಹಗ್ಗವನ್ನು ಬಳಸಿಕೊಂಡು, ಯುವಕನನ್ನು ಮೇಲಕ್ಕೆ ಎತ್ತಿದ್ದಾರೆ.