ಕೊಳ್ಳೇಗಾಲ ತಾಲೂಕಿನ ಪಾಳ್ಯ ಸಮೀಪದ ನರಿಪುರ ಗ್ರಾಮದ ಪಾಳ್ಯ ಕ್ರಾಸ್ ಬಳಿ ಆಡು–ಕುರಿಗಳನ್ನು ತುಂಬಿಕೊಂಡು ಸಾಗುತ್ತಿದ್ದ ಇಚರ್ ವಾಹನ ಪಲ್ಟಿಯಾಗಿ ಸುಮಾರು 25 ಆಡು–ಕುರಿ ಮರಿಗಳು ಸಾವನ್ನಪ್ಪಿದ ಘಟನೆ ಜರುಗಿದೆ. ಟಿಎನ್ 37 ಸಿಕ್ಯೂ 7177 ನಂಬರಿನ ಇಚರ್ ವಾಹನದಲ್ಲಿ ಸುಮಾರು 200 ಆಡು–ಕುರಿ ಮರಿಗಳು ಸಾಗಿಸಲಾಗುತ್ತಿದ್ದು, ವಾಹನ ನಿಯಂತ್ರಣ ತಪ್ಪಿ ಮುಗುಚಿದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ವಾಹನದಲ್ಲಿದ್ದ ಚಾಲಕ ಹಾಗೂ ಇನ್ನೂ ಆರು ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.