ಬೆಂಗಳೂರಿನ ಸದಾಶಿವನಗರದಲ್ಲಿರುವ ಮಧು ಬಂಗಾರಪ್ಪ ಅವರ ಗೃಹಕಚೇರಿಗೆ ಭೇಟಿ ನೀಡಿದ ಏಷಿಯನ್ ಇಂಟರ್‌ನ್ಯಾಷನಲ್ ಪಬ್ಲಿಕ್ ಸ್ಕೂಲ್ (AIPS), ಬೆಂಗಳೂರು ಇಲ್ಲಿನ ವಿದ್ಯಾರ್ಥಿಗಳು 2026ರಲ್ಲಿ ನಡೆಯಲಿರುವ “AIPS Global World Record Fiesta – 2026” ಕಾರ್ಯಕ್ರಮದಲ್ಲಿ ಭಾಗವಹಿಸಲು ಸಜ್ಜಾಗುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಪುಟ್ಟ ವಯಸ್ಸಿನಲ್ಲೇ ಜಾಗತಿಕ ವೇದಿಕೆಗೆ ಹೆಜ್ಜೆ ಇಡುತ್ತಿರುವ ಈ ಮಕ್ಕಳಲ್ಲಿ ಅಪಾರವಾದ ಜ್ಞಾನ, ಕೌಶಲ್ಯ, ಆತ್ಮವಿಶ್ವಾಸ ಮತ್ತು ಪರಿಶ್ರಮ ಅಡಗಿದೆ. ಯಶಸ್ಸು ಗೆಲುವಿನಲ್ಲಿ ಮಾತ್ರವಲ್ಲ, ಸತ್ಯಸಂಧ ಪ್ರಯತ್ನದಲ್ಲೂ ಇದೆ ಎಂಬುದನ್ನು ನೆನಪಿಸಿಕೊಂಡು ಧೈರ್ಯ, ಸಂತೋಷ ಮತ್ತು ಏಕಾಗ್ರತೆಯಿಂದ ತಮ್ಮ ಶ್ರೇಷ್ಠತೆಯನ್ನು ಪ್ರದರ್ಶಿಸುವಂತೆ ಅವರಿಗೆ ಹಾರೈಸಲಾಗಿದೆ.