ಬಳ್ಳಾರಿ: ಪ್ರತಿಯೊಬ್ಬರೂ ತುರ್ತು ಆರೋಗ್ಯ ಸಮಸ್ಯೆಗಳ ಮುಂಜಾಗ್ರತಾ ಕ್ರಮ ಬಗ್ಗೆ ಮಾಹಿತಿ ಹೊಂದಬೇಕು,ನಗರದಲ್ಲಿ ಸುಭಾಷ್ ಶಿಂಧೆ
ರಾಷ್ಟಿçÃಯ ವಿಪತ್ತು ಪ್ರತಿಕ್ರಿಯೆ ಪಡೆ ವತಿಯಿಂದ ಬಳ್ಳಾರಿ ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ನ.15,ಶನಿವಾರ, ಮಧ್ಯಾಹ್ನ 12ಗಂಟೆಗೆ ಹಮ್ಮಿಕೊಂಡಿದ್ದ ತತ್ಕ್ಷಣದ ಹೃದಯಾಘಾತ ಹಾಗೂ ಇತರೆ ಆರೋಗ್ಯ ಸಮಸ್ಯೆ ಕುರಿತಂತೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡುವ ಮೂಲಕ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವಯಸ್ಸಿನ ಮಿತಿಗಳಿಲ್ಲದೇ ಹೃದಯಾಘಾತಗಳು ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಹೃದಯ ಶ್ವಾಸಕೋಶ ಪುನರುಜ್ಜೀವನ (ಸಿಆರ್ಪಿ) ಕುರಿತು ಮಾಹಿತಿ ಹೊಂದಿ ಹೃದಯಾಘಾತ ಒಳಗಾದ ವ್ಯಕ್ತಿಗೆ ತರ್ತು ಪರಿಸ್ಥಿತಿಯಲ್ಲಿ ಸಹಾಯ ಮಾಡಬೇಕು ಎಂದರು