ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿದ ಆರೋಪಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಯೂಟ್ಯೂಬರ್ ಸಮೀರ್ನನ್ನು ಸಹ ಆರೋಪಿಯನ್ನಾಗಿ ಸೇರಿಸಿ ಕೇಸ್ ದಾಖಲಿಸುವಂತೆ ಸಾಗರದ ತಾಲ್ಲೂಕು ನಾಗರಿಕ ಹಿತರಕ್ಷಣಾ ಸಮಿತಿ ಶುಕ್ರವಾರ ಸಂಜೆ 4 ಗಂಟೆಗೆ ಆಗ್ರಹಿಸಿದೆ. ಈ ಕುರಿತು ಸಮಿತಿಯು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದೆ ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸಂಚಾಲಕ ಎಸ್.ವಿ.ಹಿತಕರ ಜೈನ್, ಶ್ರೀಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿಗಳ ವಿರುದ್ಧ ಪಿತೂರಿ ನಡೆಸಲು ಯತ್ನಿಸಿದ್ದ 'ಬುರುಡೆ ಗ್ಯಾಂಗ್'ನ ನಿಜಬಣ್ಣ ಬಯಲಾಗಿದೆ ಎಂದರು. ಶ್ರೀಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರಲು ಪ್ರಯತ್ನಿಸಿದ ಕೆಲವರ ಪಿತೂರಿ ಅನಾವರಣಗೊಂಡಿದ್ದು, ಈಗಾಗಲೇ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ.