ಶುಕ್ರವಾರ ವೈಟ್ಫೀಲ್ಡ್ನಲ್ಲಿ ಸಾರ್ವಜನಿಕರಲ್ಲಿ ಪೋಲಿಯೋ ಲಸಿಕೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಬೈಕ್ ರ್ಯಾಲಿ ಆಯೋಜಿಸಲಾಯಿತು. ಈ ರ್ಯಾಲಿಯು ವೈಟ್ಫೀಲ್ಡ್ ಒಳವರ್ತುಲ ರಸ್ತೆ ಸರ್ಕಲ್ನಿಂದ ಪೂರ್ವ ನಗರ ಪಾಲಿಕೆ ಕೇಂದ್ರ ಕಚೇರಿವರೆಗೆ ಸುಮಾರು 5.7 ಕಿಲೋಮೀಟರ್ ದೂರ ಬೈಕ್ ರ್ಯಾಲಿ ನಡೆಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಬೈಕ್ ರ್ಯಾಲಿಗೆ ಆಯುಕ್ತರು ಚಾಲನೆ ನೀಡಿದ್ದು, ಆರೋಗ್ಯಾಧಿಕಾರಿ ಡಾ. ಸವಿತಾ ಅವರು ನೇತೃತ್ವ ವಹಿಸಿದ್ದರು. ರ್ಯಾಲಿಯಲ್ಲಿ ಪಾಲ್ಗೊಂಡ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪಲ್ಸ್ ಪೋಲಿಯೋ ಜಾಗೃತಿ ಫಲಕಗಳನ್ನು ಪ್ರದರ್ಶಿಸಿದರು.