ಮಂಡ್ಯ: ಹೆಚ್.ಮಲ್ಲಿಗೆರೆಯಲ್ಲಿ ಶಿರಡಿಗೆ ತೆರಳಿದ್ದ ಮಹಿಳೆ ಮನೆಗೆ ಕನ್ನ, ₹ 6.24 ಲಕ್ಷದ ಚಿನ್ನಾಭರಣ ನಗದು ದೋಚಿರುವ ಕಳ್ಳರು
Mandya, Mandya | Oct 31, 2025 ಶಿರಡಿಗೆ ತೆರಳಿದ್ದವರ ಮನೆಗೆ ಕನ್ನ ಹಾಕಿರುವ ಕಳ್ಳರು ₹ 6.24 ಲಕ್ಷದ ಚಿನ್ನಾಭರಣ ನಗದು ದೋಚಿರುವ ಘಟನೆ ಹೆಚ್.ಮಲ್ಲಿಗೆರೆಯಲ್ಲಿ ನಡೆದಿದೆ. ಲೀಲಾವತಿ ಕೋಂ ಎಂ.ಹೆಚ್.ಜಯಶಂಕರ್ ಅವರ ಮನೆಯಲ್ಲಿ ಘಟನೆ ಜರುಗಿದ್ದು, ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಅರಂಭವಾಗಿದೆ ಎಂದು ಶುಕ್ರವಾರ ನಗರದಲ್ಲಿ ಎಸ್ಪಿ ಕಚೇರಿ ಮಾಹಿತಿ ನೀಡಿದೆ. ಅ.22ರಂದು ಶಿರಡಿ ಪ್ರವಾಸಕ್ಕೆ ತೆರಳಿದ ಲೀಲಾವತಿ ಅವರು ಅ.30 ರಂದು ಮರಳಿ ಬಂದಾಗ ಮನೆ ಮುಂಭಾಗಿಲು ಮೀಟಿ ಕಳ್ಳರು ಒಳ ನುಗ್ಗಿರುವುದು ಕಂಡು ಬಂದಿದೆ. ಮನೆ ಒಳಗೆ ಬೀರು ಬಾಗಿಲು ಹೊಡೆದು 60 ಗ್ರಾಂ ಮಾಂಗಲ್ಯಸರ, 246 ಗ್ರಾಂ ತೂಕದ ಬೆಳ್ಳಿ ಸಾಮಾನುಗಳಾದ ಅಕ್ಷತೆ ಬಟ್ಟಲು, ದೀಪಾಲೆ ಕಂಬ, ಕುಂಕುಮ ಬಟ್ಟಲು, ಕಾಮಾಕ್ಷಿ ದೀಪ ಹಾಗೂ 2 ಸಾವಿರ ನಗದು ಕದ್ದೊಯ್ಯಲಾಗಿದೆ.