ರಾಯಚೂರು: ಜೆಡಿಎಸ್ ಪಕ್ಷದ ರಜತ ಮಹೋತ್ಸವ ಕಾರ್ಯಕ್ರಮ : ಜಿಲ್ಲಾದ್ಯಕ್ಷ ಹೇಳಿಕೆ
ರಾಜ್ಯದ ಪ್ರಾದೇಶಿಕ ರಾಜಕೀಯಕ್ಕೆ ತನ್ನದೇ ಆದ ಗುರುತು ಮೂಡಿಸಿಕೊಂಡಿರುವ ಜೆಡಿಎಸ್ ಪಕ್ಷವು ಈ ವರ್ಷ ತನ್ನ 25ನೇ ವರ್ಷದ ಜಯಂತಿಯನ್ನು ರಜತ ಮಹೋತ್ಸವವಾಗಿ ಆಚರಿಸಲು ಸಜ್ಜಾಗಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಂ. ವಿರೂಪಾಕ್ಷಿ ಬುಧವಾರ 10ಗಂಟೆ 30 ನಿಮಿಷಕ್ಕೆ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡನಾಡಿನ ಧ್ವನಿಯಾಗಿ ನಾಲ್ಕು ದಶಕಗಳಿಂದ ಜನಪರ ಹೋರಾಟ ನಡೆಸುತ್ತಿರುವ ಜೆಡಿಎಸ್ ಪಕ್ಷವು ಪ್ರಾದೇಶಿಕ ಪಕ್ಷಗಳ ಇತಿಹಾಸದಲ್ಲಿ ಅಪರೂಪದ ಸಾಧನೆ ಸಾಧಿಸಿದೆ ಎಂದು ಹೇಳಿದರು