ಕುಡಿದ ಮತ್ತಿನಲ್ಲಿ ಅಸಭ್ಯವಾಗಿ ವರ್ತಿಸಿದ ಯುವಕನೋರ್ವನಿಗೆ ಸಾರ್ವಜನಿಕರು ಥಳಿಸಿರುವ ಘಟನೆ ಚಿತ್ರದುರ್ಗ ನಗರದಲ್ಲಿ ಜರುಗಿದೆ. ನಗರದ ಗಾಂಧಿ ವೃತ್ತದಲ್ಲಿ ಅಪರಿಚಿತ ಯುವಕನೋರ್ವನಿಗೆ ಥಳಿಸಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಕುಡಿದು ಟೈಟ್ ಆಗಿದ್ದ ಯುವಕ ಜನರ ಎದುರಿಗೆ ಅಸಭ್ಯವಾಗಿ ವರ್ತಿಸಿದ್ದ. ಇದರಿಂದ ರೊಚ್ಚಿಗೆದ್ದ ಜನರು ಚಪಾಳಕ್ಕೆ ಗೂಸ ಕೊಟ್ಟಿದ್ದಾರೆ. ಅಲ್ಲದೆ ಸ್ಥಳದಲ್ಲಿದ್ದ ಆಟೋ ಚಾಲಕರು ಸೇರಿದಂತೆ ಹಲವರು ಬೈದು ಬುದ್ದಿ ಹೇಳಿದ್ದಾರೆ. ಇನ್ನೂ ಅಲ್ಲೇ ಇದ್ದ ಸ್ಥಳೀಯರು ಗೂಸ ಕೊಟ್ಟಿರುವ ವಿಡಿಯೋ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸೋಮವಾರ ಸಂಜೆ 5 ಗಂಟೆಗೆ ವೈರಲ್ ಆಗಿದೆ