ಗುಂಡ್ಲುಪೇಟೆ: ಪರಿಹಾರ ಬೇಡ ಹಸು ಖರೀದಿಸಿ ಕೊಡಿ; ದೇಪಾಪುರದಲ್ಲಿ ಹುಲಿ ದಾಳಿಗೆ ಹಸು ಕಳೆದುಕೊಂಡ ರೈತನ ಆಕ್ರೋಶ
ದೇಪಾಪುರದಲ್ಲಿ ಹುಲಿ ದಾಳಿಗೆ ಹಾಡಹಗಲೇ ಹಸು ಬಲಿಯಾಗಿದ್ದು ಹುಲಿ ದಾಳಿ ವಿಚಾರ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ ವೇಳೆ ರೈತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಹುಲಿ ದಾಳಿಗೆ ಮೃತಪಟ್ಟ ಹಸು ನಿತ್ಯ 10 ಲೀ. ಹಾಲು ಕೊಡುತ್ತಿತ್ತು. ಹೈನುಗಾರಿಕೆಯಿಂದ ಜೀವನ ಸಾಗಿಸುತ್ತಿದ್ದೆವು. ಈಗ, ಹಸು ಕಳೆದುಕೊಂಡು ನಷ್ಟ ಉಂಟಾಗಿದ್ದು ತಮಗೆ ಪರಿಹಾರ ಬೇಡ ಹಸುವನ್ನು ಖರೀದಿಸಿ ಕೊಡಿ, ನೀವು ಪ್ರಾಣಿಗಳನ್ನು ರಕ್ಷಣೆ ಮಾಡಿದಂತೆ ರೈತರನ್ನು ರಕ್ಷಿಸಿ ಎಂದು ಹಸು ಕಳೆದುಕೊಂಡ ರೈತ ಗುರುಮಲ್ಲಪ್ಪ ಶನಿವಾರ ಕಿಡಿಕಾರಿದ್ದಾರೆ. ಪರಿಹಾರದ ಹಣದ ಬದಲು ತನಗೇ ಹಸುವನ್ನೇ ತೆಗೆದುಕೊಡಿ, ಜೀವನ ಮಾಡುವುದಾದರೂ ಹೇಗೆ ಎಂದು ರೈತ ಆಕ್ರೋಶ ಹೊರಹಾಕಿದ್ದಾರೆ.