ತೇರದಾಳ ಪಟ್ಟಣದಲ್ಲಿ ಕತ್ತರಿಯಿಂದ ಕತ್ತು ಕೊಯ್ದು ಹೆಂಡತಿಯ ಕೊಲೆ ಮಾಡಿದ ಗಂಡ
Terdal, Bagalkot | Dec 12, 2025
ಗಂಡನೇ ಹೆಂಡತಿಯನ್ನ ಕತ್ತರಿಯಿಂದ ಎದೆ ಹಾಗೂ ಕುತ್ತಿಗೆಗೆ ಇರಿದು ಕೊಲೆ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ತೇರದಾಳ ಪಟ್ಟಣದಲ್ಲಿ ಜರುಗಿದೆ. ಕಳೆದ ದಿನಾಂಕ 10 ರ ರಾತ್ರಿ ಅಂದಾಜು ಹತ್ತು ಗಂಟೆ ಸಂದರ್ಭದಲ್ಲಿ ಕೊಲೆಯಾಗಿದೆ ಎಂದು ತಿಳಿದು ಬಂದಿದೆ.ಕೊಲೆಯಾದ ಮಹಿಳೆಯನ್ನ ಲಕ್ಷ್ಮೀ.ಭರತೇಶ.ಮಹೇಶವಾಡಗಿ(28)ಎಂದು ಗುರ್ತಿಸಲಾಗಿದೆ.ಪ್ರಾಥಮಿಕ ಮಾಹಿತಿ ಪ್ರಕಾರ ಗಂಡ ಭರತೇಶ ಮಹೇಶವಾಡಗಿ ಕೊಲೆಮಾಡಿದ್ದಾಗಿ ಎಸ್ಪಿ ಸಿದ್ದಾರ್ಥ ಗೋಯಲ್ ತಿಳಿಸಿದ್ದಾರೆ.