ಚಳ್ಳಕೆರೆ: ದೊಡ್ಡೇರಿ ಬಳಿ ಬೈಕ್ ಅಪಘಾತ: ಮೂವರ ಸ್ಥಿತಿ ಗಂಭೀರ
ಎರಡು ಬೈಕ್ ಗಳ ನಡುವೆ ಮುಖಾ-ಮುಖಿ ಡಿಕ್ಕಿಯಾಗಿ ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಸೋಮವಾರ ಮಧ್ಯಾಹ್ನ 12 ಗಂಟೆಗೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ, ಚಳ್ಳಕೆರೆ ತಾಲೂಕಿನ ದೊಡ್ಡೇರಿ ಬಳಿ ಘಟನೆ ನಡೆದಿದೆ. ಉಪ್ಪಾರಹಟ್ಟಿಯ ಈರಣ್ಣ, ತಳುಕು ಗ್ರಾಮದ ಶ್ರೇಯಸ್, ಹಾಗೂ ರವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್ ಸವಾರರ ಅತಿಯಾದ ವೇಗ ಹಾಗೂ ಅಜಾಗರೂಕತೆಯಿಂದ ಅಪಘಾತವಾಗಿದೆ. ಗಾಯಾಳುಗಳಿಗೆ ಚಳ್ಳಕೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.