ಚಿತ್ರದುರ್ಗ: ಚಿತ್ರದುರ್ಗದಲ್ಲಿ ಚಿತ್ರ ಕಲಾವಿದ ವಿರೇಶ್ ಅವರಿಂದ ಸಾಲು ಮರದ ತಿಮ್ಮಕ್ಕ ಅವರಿಗೆ ವಿನೂತನ ಶ್ರದ್ಧಾಂಜಲಿ
ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ನಿಧನದ ಹಿನ್ನಲೆ ಚಿತ್ರದುರ್ಗದಲ್ಲಿ ಕಲಾವಿಧ ವೀರೇಶ್ ವೃಕ್ಷ ಮಾತೆಯ ಚಿತ್ರ ಬಿಡಿಸಿ ಚಿತ್ರಾಂಜಲಿ ಮೂಲಕ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ನಗರದ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದಲ್ಲಿ ಕಲಾವಿದ ವೀರೇಶ್ ಸಾಲು ಮರದ ತಿಮ್ಮಕ್ಕನವರ ನಗು ಮುಖದ ಚಿತ್ರ ಬಿಡಿಸಿ ಗೌರವ ಪೂರ್ವಕ ಶ್ರದ್ದಾಂಜಲಿ ಸಲ್ಲಿಸಿದ್ರು. ಈ ವೇಳೆ ಸಾರ್ವಜನಿಕರು ವೀರೇಶ್ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು.