ಗುಂಡ್ಲುಪೇಟೆ: ಬಂಡೀಪುರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಆನೆ ಮರಿ ತುಂಟಾಟ, ವಾಹನ ಸವಾರರಿಗೆ ಪೀಕಲಾಟ
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದ ಕರ್ನಾಟಕ ಕೇರಳ ಗಡಿಯಲ್ಲಿ ಮರಿ ಆನೆ ತಾಯಿಯಿಂದ ಬೇರ್ಪಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ತುಂಟಾಟ ಆಡುತ್ತಿದೆ. ಇನ್ನೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡುವ ಕಾರು, ಬಸ್ ಲಾರಿಗಳಿಗೆ ಅಡ್ಡ ಹಾಕಿ ನಿಂತು ತುಂಟಾಟವಾಡುತ್ತಿದೆ ಮರಿ ಆನೆಯಿಂದ ವಾಹನ ಸವಾರರಿಗೆ ಪೀಕಲಾಟವಾಗಿದೆ. ಹೆದ್ದಾರಿಯಲ್ಲಿ ತನ್ನ ತಾಯಿಯನ್ನು ಹುಡುಕುತ್ತಿರುವ ಆನೆ ಮರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಡುತ್ತಿದೆ.