ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ರಾವೂರು ಗ್ರಾಮದಲ್ಲಿ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಡಿವೈಎಸ್ಪಿ ಶಂಕರಗೌಡ ಪಾಟೀಲ್ ಶಹಾಬಾದ್ ರವರು ಹಮ್ಮಿಕೊಂಡರು. ಗ್ರಾಮದಲ್ಲಿ ಸಂಚಾರ ಸಮಯದಲ್ಲಿ ಕಾಣಿಸದ ಭೀತಿ ಇರುವ ಎತ್ತಿನ ಬಂಡಿಗಳ ಮೇಲೆ ರೇಡಿಯಂ ಸ್ಟಿಕರ್ಗಳನ್ನು ಅಂಟಿಸುವ ಮೂಲಕ ರಸ್ತೆ ಅಪಘಾತ ತಡೆ ಮತ್ತು ಸಾರ್ವಜನಿಕ ಸುರಕ್ಷತೆಗಾಗಿ ಜಾಗೃತಿ ಮೂಡಿಸಲಾಯಿತು ಎಂದು ಸೋಮವಾರ 7 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ..