ಹಾವೇರಿ ಜಿಲ್ಲೆಯಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಯುಗಾದಿ ಹಬ್ಬವನ್ನು ಆಚರಿಸಲಾಯಿತು. ಗ್ರಾಮೀಣ ಪ್ರದೇಶಗಳಲ್ಲಂತೂ ಎಲ್ಲಿಲ್ಲದ ಹಬ್ಬದ ಸಂಭ್ರಮ ಮನೆ ಮಾಡಿತ್ತು. ರೈತರು ತಮ್ಮ ತಮ್ಮ ಜಮೀನುಗಳಿಗೆ ತೆರಳಿ ಪೂಜೆ ಸಲ್ಲಿಸಿ, ನೇಗಿಲು ಹೊಡೆಯುವ ಮೂಲಕ ಕೃಷಿ ಚಟುವಟಿಕೆ ಆರಂಭಿಸಿದರೆ, ಜಮೀನುಗಳಲ್ಲಿ ಬೀಡುಬಿಟ್ಟಿರುವ ಸಂಚಾರಿ ಕುರುಬರು ಯುಗಾದಿ ಹಬ್ಬವನ್ನು ವಿಶಿಷ್ಟವಾಗಿ ಆಚರಣೆ ಮಾಡಿದರು. ಭಾನುವಾರ ಬೆಳಗಿನ ಜಾವ ಅಡುಗೆ ಮಾಡಿ, ಸೂರ್ಯ ಉದಯಿಸುವ ಪೂರ್ವದಲ್ಲಿ ಹತ್ತಿರದ ಹುತ್ತಗಳಿಗೆ ತೆರಳಿ ವಿಶೇಷವಾದ ಪೂಜೆ ಸಲ್ಲಿಸಿ, ಬಳಿಕ ತಾವು ಇರುವ ಜಮೀನುಗಳಲ್ಲಿಯೇ ಕಂಬಳಿ ಹಾಸಿ, ತಮ್ಮ ಕುಲದೇವರುಗಳ ಮೂರ್ತಿಯನ್ನಿಟ್ಟು ವಿಶೇಷವಾದ ಪೂಜೆ ಸಲ್ಲಿಸಿ, ಕುರಿಗಳಿಗೂ ಪೂಜೆ ಸಲ್ಲಿಸಿದರು. ಭಾನುವಾರ ಬೆಳಗಿನ ಜಾವದಿಂದ ಮಧ್ಯಾಹ್ನ