ಶಿವಮೊಗ್ಗ: ಶಿವಮೊಗ್ಗದ ರಿಂಗ್ ರಸ್ತೆಯಲ್ಲಿ ಗಾಂಜಾ ಮಾರಾಟ, ಕೆಂಪು ಮಿಶ್ರಿತ ವಸ್ತು ಜೊತೆ ಇಬ್ಬರ ಬಂಧನ
ಶಿವಮೊಗ್ಗದ ಲಕ್ಷ್ಮೀಪುರ ಮತ್ತು ಶ್ರೀರಾಮ್ ಪುರದ ರಿಂಗ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುವಾಗ ಡ್ರಗ್ಸ್ ಸಹ ಪತ್ತೆಯಾಗಿದೆ. ಈ ಡ್ರಗ್ಸ್ ಗ್ರಾಂಗೆ 10 ಸಾವಿರ ರೂ ಎಂಬುದಾಗಿ ತಿಳಿದುಬಂದಿದೆ. ಸ್ಕಾರ್ಪಿಯೋ ಕಾರಿನಲ್ಲಿ ಬಂದ ಇಬ್ಬರು ಯುವಕರು ಈ ರಿಂಗ್ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಆಧಾರದ ಮೇರೆಗೆ ತುಂಗ ನಗರ ಪಿಎಸ್ಐ ರಘುವೀರ್ ಅವರು ಮೇಲಾಧಿಕಾರಿಗಳ ಅನುಮತಿ ಮೇರೆಗೆ, ತಂಡವನ್ನ ರಚಿಸಿಕೊಂಡು ಸ್ಥಳಕ್ಕೆ ದೌಡಾಯಿಸಿದ್ದಾರೆ. ರಸ್ತೆ ಬದಿ ನಿಲ್ಲಿಸಿಕೊಂಡು ಗಾಂಜಾದ ಜೊತೆ ಕೆಂಪು ಮಿಶ್ರಿತ ವಸ್ತುವನ್ನ ಮಾರಾಟ ಮಾಡುತ್ತಿರುವುದು ತಿಳಿದುಬಂದಿದ್ದು ಪೊಲೀಸರು ಸ್ಕಾರ್ಪಿಯೋ ವಾಹನವನ್ನ ಸೀಜ್ ಮಾಡಿದ್ದಾರೆ.