ಚಾಮರಾಜನಗರ ಉಪವಿಭಾಗ ವ್ಯಾಪ್ತಿಯಲ್ಲಿ 3ನೇ ತ್ರೈಮಾಸಿಕ ವಿದ್ಯುತ್ ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಚಾಮರಾಜನಗರ ಪಟ್ಟಣ ಸೇರಿದಂತೆ ವಿವಿಧೆಡೆ ಡಿಸೆಂಬರ್ 14 ರಂದು ಕಾಮಗಾರಿ ನಿರ್ವಹಿಸಲಿರುವುದರಿಂದ ಅಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಕೋಡಿಮೋಳೆ, ಚಾಮರಾಜನಗರ ಟೌನ್-1, ಜಿಲ್ಲಾಧಿಕಾರಿಗಳ ಕಚೇರಿ, ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣ, ರೈಲ್ವೆ ಬಡಾವಣೆ, ಕೆ.ಹೆಚ್.ಪಿ. ಕಾಲೋನಿ, ಪೊಲೀಸ್ ಕ್ವಾರ್ಟಸ್, ಜೂನಿಯರ್ ಕಾಲೇಜ್, ಗುಂಡ್ಲುಪೇಟೆ ರಸ್ತೆ, ಮಾದಾಪುರ, ದೊಡ್ಡರಾಯಪೇಟೆ, ಮಂಗಲ, ಕಾಗಲವಾಡಿ, ಹರದನಹಳ್ಳಿ, ಬೇಡರಪುರ, ಟಿ.ಕೆ ಮೋಳೆ, ಶಿವಪುರ, ರಾಮಸಮುದ್ರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ